top of page

Millex Mother Root introduction

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಮಾತಿನಂತೆ ಒಬ್ಬ ಮಾನವನ ಆರೋಗ್ಯ ಪರಿಸ್ಥಿತಿ ಉತ್ತಮವಾಗಿರಬೇಕೆಂದರೆ ಆತನ ಬಾಲ್ಯದಲ್ಲಿ ಸರಿಯಾದ ಆರೈಕೆಯನ್ನು ಪಡೆದುಕೊಂಡಿರಬೇಕು. ಹಿಂದೆ ಹಿರಿಯರು ಚಿಕ್ಕ ಮಕ್ಕಳಿಗೆ ನೀಡುತ್ತಿದ್ದ ಪೌಷ್ಟಿಕ ಆಹಾರಗಳನ್ನು ಇಂದಿನ ದಿನಗಳಲ್ಲಿ ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ನೀಡುವುದು ಅಸಾಧ್ಯ ಎಂಬ ಮಾತಿದೆ. ಆದರೆ, ಈ ಮಾತನ್ನು ಹುಸಿಗೊಳಿಸಲು ತಯಾರಿಸಿರುವ ಉತ್ಪನ್ನವೇ ಮಿಲ್ಲೆಕ್ಸ್ (Millex) ಮದರ್ ರೂಟ್(Mother Root) . ಈ ಮದರ್ ರೂಟ್‌ನ್ನು ನಿಮ್ಮ ಮನೆಯ ಪುಟ್ಟ ಮಕ್ಕಳಿಗೆ ನೀಡಿದರೆ, ಆ ಮಗುವಿನಲ್ಲಾಗುವ ಬೆಳವಣಿಗೆ, ಚುರುಕುತನ ನಿಮ್ಮ ಗಮನಕ್ಕೆ ಬರಲಿವೆ. ತನ್ನ ಮಗು ಉತ್ತಮ ಆಹಾರವನ್ನು ಸೇವಿಸಲಿ, ಹಾಗಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಶಕ್ತಿವಂತರಾಗಿರಬಹುದು ಎಂಬ ನಿರೀಕ್ಷೆಯನ್ನು ಹೊಂದಿರುವ ಅನೇಕ ತಾಯಂದಿರು ಈ ಮಿಲ್ಲೆಕ್ಸ್ (Millex) ಮದರ್ ರೂಟ್(Mother Root) ಉತ್ಪನ್ನವನ್ನು ಬಳಸಿದ್ದು, ಇದರಿಂದ ತಮ್ಮ ಮಗುವಿನಲ್ಲಾದ ಹಲವು ಬದಲಾವಣೆಗಳನ್ನು ಸಂತಸದಿಂದ ವ್ಯಕ್ತಪಡಿಸಿದ್ದಾರೆ.


'ಮಿಲ್ಲೆಕ್ಸ್' (Millex) ಮಲೆನಾಡಿನ ಹೆಮ್ಮೆಯ ಸಂಸ್ಥೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ತನ್ನದೇ ಆದ ವಿಶೇಷ ಹಾಗೂ ಉನ್ನತ ಗುಣಮಟ್ಟದ ಜನಪ್ರಿಯ ಉತ್ಪನ್ನಗಳಿಂದ ರಾಜ್ಯದ ಮನೆ ಮಾತಾಗಿದೆ. ಈ ಸಂಸ್ಥೆಯ ಆಹಾರ ಉತ್ಪನ್ನಗಳು ಆಯುರ್ವೇದದ ಗುಣಗಳನ್ನು ಹೊಂದಿರುವುದರಿಂದ ಇವು ಸಂಜೀವಿನಿಯಂತೆ ಕಾರ್ಯ ನಿರ್ವಹಿಸುತ್ತವೆ ಹಾಗೂ ಇದರ ಉಪಯೋಗ ಪಡೆದುಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.


ಮಿಲ್ಲೆಕ್ಸ್ (Millex) ಉತ್ಪನ್ನಗಳು

ಮಿಲ್ಲೆಕ್ಸ್(Millex) ಸಂಸ್ಥೆ ಮಿಲ್ಲೆಟ್ ಹೆಲ್ತ್ ಮಿಕ್ಸ್, ಮದರ್ ರೂಟ್, ಮಲ್ಟಿ ಮಿಲ್ಲೆಟ್(Millex) ದೋಸಾ ಪ್ರಿಮಿಕ್ಸ್ ಹಾಗೂ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಿದ್ದು, ಈ ಎಲ್ಲಾ ಉತ್ಪನ್ನಗಳೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿವೆ.


ಮದರ್ ರೂಟ್‌ನಲ್ಲಿ ಉಪಯೋಗಿಸಿರುವ ಪದಾರ್ಥಗಳು

ಮಿಲ್ಲೆಕ್ಸ್ (Millex) ಮದರ್ ರೂಟ್(Mother Root) ಉತ್ಪನ್ನದಲ್ಲಿ ರಾಗಿ, ಕೆಂಪುಅಕ್ಕಿ, ಮೊಳಕೆ ಕಟ್ಟಿದ ಹೆಸರುಕಾಳು, ಗೋಧಿ, ಬಾರ್ಲಿ, ತೊಗರಿಬೇಳೆ, ಕಡಲೆಬೀಜ, ಗೋಡಂಬಿ, ಬಾದಾಮಿ, ವಾಲ್‌ನಟ್, ಏಲಕ್ಕಿ, ಕರಿಮೆಣಸು ಹಾಗೂ ಪಿಸ್ತಾ ಈ ಎಲ್ಲಾ ಪದಾರ್ಥಗಳನ್ನು ಬಳಸಲಾಗಿದೆ.


ಕೆಮಿಕಲ್ಸ್ ರಹಿತ ಉತ್ಪನ್ನ

ಮಿಲ್ಲೆಕ್ಸ್ (Millex) ಮದರ್ ರೂಟ್(Mother Root) ಉತ್ಪನ್ನದಲ್ಲಿ ಆಯ್ದ ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗಿದ್ದು, ಯಾವುದೇ ಕೆಮಿಕಲ್ಸ್, ಹೆಚ್ಚುವರಿ ಅನಗತ್ಯ ಪದಾರ್ಥಗಳನ್ನು ಉಪಯೋಗಿಸಿಲ್ಲ. ಹೀಗಾಗಿ ಇದೊಂದು ಕೆಮಿಕಲ್ಸ್ ರಹಿತ ಉತ್ಪನ್ನವಾಗಿದ್ದು, ಮಗುವಿನ ಉತ್ತಮ ಆರೋಗ್ಯಕರ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ.


ತಯಾರಿಸಿದ್ದು ಹೇಗೆ

ಈ ಮೇಲೆ ಉಲ್ಲೇಖಿಸಲಾಗಿರುವ ಎಲ್ಲಾ ಸಿರಿಧಾನ್ಯ, ಏಕದಳ ಹಾಗೂ ದ್ವಿದಳ ಧಾನ್ಯಗಳು, ಒಣ ಹಣ್ಣುಗಳು ಮತ್ತು ಆಯುರ್ವೇದ ಗಿಡಮೂಲಿಕೆಗಳನ್ನು ಶುಚಿಯಾದ ನೀರಿನಲ್ಲಿ ತೊಳೆದು, 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಲಾಗುವುದು. ನಂತರ ಕುಡಿ ಮೊಳಕೆ ಕಟ್ಟಿ, ತದನಂತರ ಮಂದ ಬಿಸಿಲಿನಲ್ಲಿ ಒಣಗಿಸಿ, ಮಣ್ಣಿನ ಹೊದಿಕೆಯ ಯಂತ್ರದಲ್ಲಿ ಮಂದ ತಾಪದ ಉರಿಯಲ್ಲಿ ಹುರಿದು ಪಡಿಮಾಡಿದ ನಂತರ 3 ಪದರಗಳುಳ್ಳ ಫುಡ್‌ಗ್ರೇಡ್ ಪೊಟ್ಟಣದಲ್ಲಿ ಸುರಕ್ಷಿತವಾಗಿ ತುಂಬಿ ಪ್ಯಾಕ್ ಮಾಡಲಾಗಿದೆ. ನೋಡಿದ್ರಲ್ಲಾ ಆಧುನಿಕ ಯಂತ್ರಗಳ ಮೊರೆ ಹೋಗದೇ ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಹೇಗೆ ಮಿಲ್ಲೆಕ್ಸ್ ಮದರ್ ರೂಟ್‌ನ್ನು ಅಚ್ಚುಕಟ್ಟಾಗಿ ತಯಾರಿಸಿ ಗ್ರಾಹಕರ ಆರೋಗ್ಯದ ನಿಗಾ ವಹಿಸಿದ್ದಾರೆ ಅಂತ. ಇದಲ್ಲವೇ ಮೇಕ್ ಇನ್ ಇಂಡಿಯಾಗೆ ಹಿಡಿದ ಕೈಗನ್ನಡಿ.




ಯಾವ ವಯಸ್ಸಿನವರು ಬಳಸಬಹುದು?

ಮಿಲ್ಲೆಕ್ಸ್ (Millex) ಮದರ್ ರೂಟ್(Mother Root) ಉತ್ಪನ್ನವನ್ನು 8 ತಿಂಗಳ ಮಕ್ಕಳಿಂದ 30 ತಿಂಗಳ ಮಕ್ಕಳವರೆಗೆ ನೀಡಬಹುದಾಗಿದೆ. ಇದೊಂದು ಆರಂಭಿಕ ಆಹಾರ ವರ್ಗಕ್ಕೆ ಸೇರಿದ ಉತ್ಪನ್ನವಾಗಿದ್ದು, ಮಗುವಿನ ಆರಂಭಿಕ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶ ಒದಗಿಸುವಲ್ಲಿ ಸಹಾಯ ಮಾಡಲಿದೆ.


ಮದರ್ ರೂಟ್‌ನಲ್ಲಿದೆ(Mother Root) ಪ್ರೊಟೀನ್, ವಿಟಮಿನ್

ಮಿಲ್ಲೆಕ್ಸ್ (Millex) ಮದರ್ ರೂಟ್(Mother Root) ಉತ್ಪನ್ನವು ಅತಿಹೆಚ್ಚು ಪ್ರೊಟೀನ್, ವಿಟಮಿನ್ಸ್, ಮಿನರಲ್ಸ್ ಹಾಗೂ ಪೋಷಕಾಂಶಗಳನ್ನು ಹೊಂದಿದ್ದು, ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಲಿದೆ.


ಮಾಡುವ ವಿಧಾನ

ಮಿಲ್ಲೆಕ್ಸ್ (Millex) ಮದರ್ ರೂಟ್(Mother Root) ತಯಾರಿಸುವುದು ಬಹಳ ಸುಲಭ. ಒಂದೂವರೆ ಚಮಚ ಮದರ್ ರೂಟ್ ಪೌಡರ್‌ಗೆ 200 ಮಿಲಿ ಲೀಟರ್ ಹಾಲು ಮತ್ತು 200 ಮಿಲಿ ಲೀಟರ್ ನೀರನ್ನು ಹಾಕಿ ಗಂಟು ಇರದ ರೀತಿ ಚೆನ್ನಾಗಿ ಕಲಸಬೇಕು. ನಂತರ ಇದಕ್ಕೆ ಒಂದು ಸಣ್ಣ ಬೆಲ್ಲದ ತುಂಡನ್ನು ಅಥವಾ ನಿಮ್ಮ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ಒಲೆಯ ಮೇಲಿಟ್ಟು ಕುದಿಸಬೇಕು. ನಂತರ ಇದನ್ನು ಸ್ವಲ್ಪ ಹೊತ್ತು ತಣಿಸಿದರೆ ಮಿಲ್ಲೆಕ್ಸ್ (Millex) ಮದರ್ ರೂಟ್(Mother Root) ಸೇವಿಸಲು ಸಿದ್ಧ.


ಅನಗತ್ಯ ಅಂಶಗಳಿಲ್ಲ

ಈ ಉತ್ಪನ್ನ ಆಕರ್ಷಕವಾಗಿ ಕಾಣಲು ಕೃತಕ ಬಣ್ಣ ಬಳಸಿಲ್ಲ, ಮೇಲೆ ಉಲ್ಲೇಖಿಸಿರುವ ಪದಾರ್ಥಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅನಗತ್ಯ ಪದಾರ್ಥಗಳನ್ನು ಬಳಸದೇ ತಯಾರಿಸಿರುವ 100% ಶುದ್ಧ ಉತ್ಪನ್ನವೇ ಮಿಲ್ಲೆಕ್ಸ್ (Millex) ಮದರ್ ರೂಟ್(Mother Root).


ಗ್ರಾಹಕರ ಮಾತು

ಮಿಲ್ಲೆಕ್ಸ್ (Millex) ಮದರ್ ರೂಟ್(Mother Root) ಉತ್ಪನ್ನವನ್ನು ಅಶ್ವಿನಿ ಎಂಬುವವರು ಖರೀದಿಸಿ ತಮ್ಮ ಮಗುವಿಗೆ ನೀಡಲು ಆರಂಭಿಸಿದ್ದಾರೆ. ಈ ಉತ್ಪನ್ನವನ್ನು ಸೇವಿಸಿದ ನಂತರ ತಮ್ಮ ಮಗು ಮುಂಚೆ ಇದ್ದದ್ದಕ್ಕಿಂತ ಹೆಚ್ಚು ಚುರುಕಾಗಿದ್ದಾನೆ ಎಂದು ಅಶ್ವಿನಿ ಹೇಳಿಕೆ ನೀಡಿದ್ದಾರೆ. ಹಾಗೂ ಇದನ್ನು ತಯಾರಿಸಲು ಐದರಿಂದ ಹತ್ತು ನಿಮಿಷದ ಸಮಯ ಸಾಕಾಗಿದ್ದು, ಕೆಲಸದ ಒತ್ತಡದ ನಡುವೆ ಮಗುವಿಗೆ ಇದನ್ನು ಸುಲಭವಾಗಿ ಮಾಡಿಕೊಡಬಹುದಾಗಿದೆ ಎಂದು ಅಶ್ವಿನಿ ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಯೊಬ್ಬ ತಾಯಿಯೂ ಇದನ್ನು ಖರೀದಿಸಿ ಮಕ್ಕಳಿಗೆ ನೀಡಿ ಅವರ ಉತ್ತಮ ಬೆಳವಣಿಗೆಗೆ ಸಹಾಯ ಮಾಡಬೇಕು ಎಂದು ಅಶ್ವಿನಿ ಅವರು ಮಿಲ್ಲೆಕ್ಸ್(Millex) ಮದರ್ ರೂಟ್‌(Mother Root) ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

92 views0 comments
bottom of page