top of page

Millex Millet Health Mix Introduction

ಆಧುನಿಕ ಜೀವನಕ್ಕೆ ತಮ್ಮನ್ನು ತಾವು ಬೇರೆ ದಾರಿಯಿಲ್ಲದೇ ಅಳವಡಿಸಿಕೊಂಡಿರುವ ಜನತೆ ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಂಡು ಮಾನಸಿಕವಾಗಿ ದೃಢವಾಗಿ ಬದುಕಬೇಕೆಂಬ ನಿಟ್ಟಿನಿಂದ ಹಲವು ಔಷಧಿಗಳ, ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಹೀಗೆ ವಿವಿಧ ಪದಾರ್ಥಗಳನ್ನು ಬಳಸಿರುವ ಗ್ರಾಹಕರಿಗೆ ಅವುಗಳಿಂದ ಸರಿಯಾದ ಫಲಿತಾಂಶ ಸಿಕ್ಕಿಲ್ಲ ಎಂದೇ ಹೇಳಬಹುದು. ಇದಕ್ಕೆ ಕಾರಣ ಆ ಉತ್ಪನ್ನಗಳಲ್ಲಿರುವ ಅನಗತ್ಯ ಪದಾರ್ಥಗಳ ಸೇರ್ಪಡೆ. ಹೀಗೆ ಉತ್ತಮ ಫಲಿತಾಂಶ ಸಿಗದೇ ಬೇಸತ್ತಿರುವ ಹಾಗೂ ಸರಿಯಾದ ಉತ್ಪನ್ನಕ್ಕಾಗಿ ಹುಡುಕುತ್ತಿರುವವರಿಗೆ ತಕ್ಕ ಉತ್ಪನ್ನ ಸಂಪೂರ್ಣವಾಗಿ ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸಿರುವ 'ಮಿಲ್ಲೆಕ್ಸ್ ಮಿಲ್ಲೆಟ್ ಹೆಲ್ತ್ ಮಿಕ್ಸ್' (Millex Millet Health Mix)


ಮಿಲ್ಲೆಕ್ಸ್ ಕಿರು ಪರಿಚಯ


'ಮಿಲ್ಲೆಕ್ಸ್' ಮಲೆನಾಡಿನ ಹೆಮ್ಮೆಯ ಸಂಸ್ಥೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ತನ್ನದೇ ಆದ ವಿಶೇಷ ಹಾಗೂ ಉನ್ನತ ಗುಣಮಟ್ಟದ ಜನಪ್ರಿಯ ಉತ್ಪನ್ನಗಳಿಂದ ರಾಜ್ಯದ ಮನೆ ಮಾತಾಗಿದೆ. ಈ ಸಂಸ್ಥೆಯ ಆಹಾರ ಉತ್ಪನ್ನಗಳು ಆಯುರ್ವೇದದ ಗುಣಗಳನ್ನು ಹೊಂದಿರುವುದರಿಂದ ಇವು ಸಂಜೀವಿನಿಯಂತೆ ಕಾರ್ಯ ನಿರ್ವಹಿಸುತ್ತವೆ ಹಾಗೂ ಇದರ ಉಪಯೋಗ ಪಡೆದುಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.


ಮಿಲ್ಲೆಕ್ಸ್ ಉತ್ಪನ್ನಗಳು

ಮಿಲ್ಲೆಕ್ಸ್ ಸಂಸ್ಥೆ ಮಿಲ್ಲೆಟ್ ಹೆಲ್ತ್ ಮಿಕ್ಸ್, (Millet Health Mix) ಮದರ್ ರೂಟ್, ಮಿಲ್ಲೆಟ್ ದೋಸಾ ಪ್ರಿಮಿಕ್ಸ್ ಹಾಗೂ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಿದ್ದು, ಈ ಎಲ್ಲಾ ಉತ್ಪನ್ನಗಳೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿವೆ.


ಮಿಲ್ಲೆಟ್ ಹೆಲ್ತ್ ಮಿಕ್ಸ್‌ನಲ್ಲಿವೆ (Millet Health Mix) ಆರೋಗ್ಯ ಸ್ನೇಹಿ ಅಂಶಗಳು

ಮಿಲ್ಲೆಕ್ಸ್ ಸಂಸ್ಥೆಯ ಉತ್ಪನ್ನವಾದ ಮಿಲ್ಲೆಟ್ ಹೆಲ್ತ್ ಮಿಕ್ಸ್ ಸಿರಿಧಾನ್ಯಗಳು, ಏಕದಳ ಹಾಗೂ ದ್ವಿದಳ ಧಾನ್ಯಗಳು, ಒಣ ಹಣ್ಣುಗಳು, ಆಯುರ್ವೇದದ ಗಿಡಮೂಲಿಕೆಗಳನ್ನೊಳಗೊಂಡ ಹೆಲ್ತ್ ಮಿಕ್ಸ್ ಆಗಿದೆ. ಹೀಗೆ ವಿವಿಧ ಧಾನ್ಯಗಳು, ಹಣ್ಣುಗಳು ಹಾಗೂ ಗಿಡಮೂಲಿಕೆಗಳ ಅಂಶಗಳನ್ನು ಹೊಂದಿರವುದರಿಂದ ಮಿಲ್ಲೆಟ್ ಹೆಲ್ತ್ ಮಿಕ್ಸ್ ಫಲಾನುಭವಿಗಳಿಗೆ ರುಚಿಸುವಲ್ಲಿ ಮತ್ತು ಅವರ ಆರೋಗ್ಯ ಸಮಸ್ಯೆ ಸುಧಾರಿಸುವಲ್ಲಿ ಸಂಜೀವಿನಿಯಂತೆ ಕೆಲಸ ನಿರ್ವಹಿಸುತ್ತದೆ.


ತಯಾರಿಸಲು ಉಪಯೋಗಿಸಿರುವ ಪದಾರ್ಥಗಳು

ಮಿಲ್ಲೆಟ್ ಹೆಲ್ತ್ ಮಿಕ್ಸ್‌ನಲ್ಲಿ ಸಾಮೆ (Millet Health Mix), ಆರಕ, ಉದಲು, ನವಣೆ, ಕೊರಲೆ, ರಾಗಿ, ಬರುಗು, ಸಜ್ಜೆ ಮತ್ತು ಬಿಳಿಜೋಳ ಹೀಗೆ ಒಂಬತ್ತು ಸಿರಿಧಾನ್ಯಗಳನ್ನು ಬಳಸಲಾಗಿದೆ. ಇತರೆ ಧಾನ್ಯಗಳಾದ ಹೆಸರುಕಾಳು, ತೊಗರಿಬೇಳೆ, ಗೋಧಿ, ಮೆಕ್ಕೆಜೋಳ, ಬಾರ್ಲಿ, ಕಡೆಲೆಕಾಳು, ಸೋಯಾಬಿನ್, ಹುರಳಿಕಾಳು, ಕೆಂಪು ಅಕ್ಕಿಯನ್ನೂ ಸಹ ಬಳಸಲಾಗಿದೆ. ಒಣಹಣ್ಣುಗಳಾದ ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್‌ನಟ್ ಮತ್ತು ಅಶ್ವಗಂಧ, ತುಳಸಿ, ಒಣಶುಂಠಿ, ಕರಿಮೆಣಸು, ಕರಿಬೇವು, ಚಕ್ಕೆ, ಏಲಕ್ಕಿ ಹಾಗೂ ಇತ್ಯಾದಿ ಆಯುರ್ವೇದ ಪದಾರ್ಥಗಳನ್ನು ಬಳಸಲಾಗಿದೆ. ಓರ್ವ ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನ ಸಾಗಿಸಲು ದಿನನಿತ್ಯ ಯಾವ ಪದಾರ್ಥಗಳನ್ನು ಸೇವಿಸಬೇಕು ಎಂದು ನಮ್ಮ ಹಿರಿಯರು ಹಾಗೂ ವೈದ್ಯರು ಸಲಹೆ ನೀಡುತ್ತಾರೋ ಆ ಎಲ್ಲಾ ಪದಾರ್ಥಗಳೂ ಸಹ ಈ ಮಿಲ್ಲೆಟ್ ಹೆಲ್ತ್ ಮಿಕ್ಸ್‌ನಲ್ಲಿದ್ದು, ಇದೊಂದು ಆರೋಗ್ಯ ಭಾಗ್ಯದ ಪ್ಯಾಕೇಜ್ ಎಂದೇ ಹೇಳಬಹುದು.


ತಯಾರಿಸಿದ್ದು ಹೇಗೆ

ಈ ಮೇಲೆ ಉಲ್ಲೇಖಿಸಲಾಗಿರುವ ಎಲ್ಲಾ ಸಿರಿಧಾನ್ಯ, ಏಕದಳ ಹಾಗೂ ದ್ವಿದಳ ಧಾನ್ಯಗಳು, ಒಣ ಹಣ್ಣುಗಳು ಮತ್ತು ಆಯುರ್ವೇದ ಗಿಡಮೂಲಿಕೆಗಳನ್ನು ಶುಚಿಯಾದ ನೀರಿನಲ್ಲಿ ತೊಳೆದು, 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಲಾಗುವುದು. ನಂತರ ಕುಡಿ ಮೊಳಕೆ ಕಟ್ಟಿ, ತದನಂತರ ಮಂದ ಬಿಸಿಲಿನಲ್ಲಿ ಒಣಗಿಸಿ, ಮಣ್ಣಿನ ಹೊದಿಕೆಯ ಯಂತ್ರದಲ್ಲಿ ಮಂದ ತಾಪದ ಉರಿಯಲ್ಲಿ ಹುರಿದು ಪಡಿಮಾಡಿದ ನಂತರ 3 ಪದರಗಳುಳ್ಳ ಫುಡ್‌ಗ್ರೇಡ್ ಪೊಟ್ಟಣದಲ್ಲಿ ಸುರಕ್ಷಿತವಾಗಿ ತುಂಬಿ ಪ್ಯಾಕ್ ಮಾಡಲಾಗಿದೆ. ನೋಡಿದ್ರಲ್ಲಾ ಆಧುನಿಕ ಯಂತ್ರಗಳ ಮೊರೆ ಹೋಗದೇ ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಹೇಗೆ ಮಿಲ್ಲೆಟ್ ಹೆಲ್ತ್ ಮಿಕ್ಸ್‌ನ್ನು ಹೇಗೆ ಅಚ್ಚುಕಟ್ಟಾಗಿ ತಯಾರಿಸಿ ಗ್ರಾಹಕರ ಆರೋಗ್ಯದ ನಿಗಾ ವಹಿಸಿದ್ದಾರೆ ಅಂತ. ಇದಲ್ಲವೇ ಮೇಕ್ ಇನ್ ಇಂಡಿಯಾಗೆ ಹಿಡಿದ ಕೈಗನ್ನಡಿ.


ಯಾವ ವಯಸ್ಸಿನವರು ಬಳಸಬಹುದು?

ಈ ಮಿಲ್ಲೆಟ್ ಹೆಲ್ತ್ ಮಿಕ್ಸ್ ಉತ್ಪನ್ನವನ್ನು ಮೂರು 3 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಬಳಸಬಹುದಾಗಿದೆ. ಅಂದಹಾಗೆ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದೇ ಮಿಲ್ಲೆಕ್ಸ್ ಸಂಸ್ಥೆ ಮದರ್‌ ರೂಟ್ ಎಂಬ ಪ್ರತ್ಯೇಕ ಉತ್ಪನ್ನವನ್ನು ತಯಾರಿಸಿದೆ.


ಒಂದಲ್ಲ ಎರಡಲ್ಲ ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಮಿಲ್ಲೆಟ್ ಹೆಲ್ತ್ ಮಿಕ್ಸ್

ಮಿಲ್ಲೆಕ್ಸ್ ಮಿಲ್ಲೆಟ್ ಹೆಲ್ತ್ ಮಿಕ್ಸ್ ಉತ್ಪನ್ನವು ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್ಸ್, ಮಿನರಲ್ಸ್ ಹಾಗೂ ಪೋಷಕಾಂಶಗಳನ್ನು ಹೊಂದಿದ್ದು, ವಯಸ್ಕರಲ್ಲಿ ಸಾಮಾನ್ಯವಾಗಿ ಕಂಡುಬರುವ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಗ್ಯಾಸ್ಟ್ರಿಕ್/ಅಸಿಡಿಟಿ, ನಿಶಕ್ತಿ, ಸುಸ್ತು, ಮೈಕೈ ನೋವು, ಮಾನಸಿಕ ಒತ್ತಡ ಹಾಗೂ ಇತರೆ ಸಮಸ್ಯೆಗಳನ್ನು ಹೋಗಲಾಡಿಸಲಿದೆ. ಇನ್ನು ಈ ಎಲ್ಲಾ ಸಮಸ್ಯೆಗಳಿಗೆ ವಿವಿಧ ಉತ್ಪನ್ನಗಳು ಹಾಗೂ ಔಷಧಿಗಳನ್ನು ಖರೀದಿಸುವ ಬದಲು ಕೇವಲ ಮಿಲ್ಲೆಟ್ ಹೆಲ್ತ್ ಮಿಕ್ಸ್‌ನ್ನು ಖರೀದಿಸಿದರೆ ಇದೊಂದೇ ಉತ್ಪನ್ನ ಎಲ್ಲಾ ಸಮಸ್ಯೆಗಳಿಗೂ ರಾಮಬಾಣದಂತೆ ಕೆಲಸ ಮಾಡಲಿದ್ದು, ಆರೋಗ್ಯದ ಜೊತೆಗೆ ಉಳಿತಾಯದ ಅನುಕೂಲ ಕೂಡ ನಿಮಗೆ ಆಗಲಿದೆ. ಇನ್ನು ಈ ಮಿಲ್ಲೆಟ್ ಹೆಲ್ತ್ ಮಿಕ್ಸ್ ಮಹಿಳೆಯರು ಎದುರಿಸುವ ಸಮಸ್ಯೆಯಾದ ಪಿಸಿಒಡಿಗೂ ಸಹ ಔಷಧಿಯಾಗಿ ಕೆಲಸ ನಿರ್ವಹಿಸಲಿದೆ.


ಗ್ಲೈಸೆಮಿಕ್ ಸೂಚ್ಯಂಕ ಅತಿ ಕಡಿಮೆ

ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇದ್ದರೆ ದೇಹದ ಶುಗರ್ ಲೆವೆಲ್ ನಿಯಂತ್ರಿಸಬಹದು. ಇನ್ನು ಈ ಕ್ರಿಯೆಯಲ್ಲಿ ಮಿಲ್ಲೆಟ್ ಹೆಲ್ತ್ ಮಿಕ್ಸ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದ್ದು, ಇದು ಫೈಬರ್ ಅಂಶಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ಇದರಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರಲಿದೆ. ಹೀಗಾಗಿ ಇದು ನಿಮ್ಮ ದೇಹದ ಶುಗರ್ ಲೆವೆಲ್ ನಿಯಂತ್ರಿಸುವಲ್ಲಿ ಉತ್ತಮ ಪಾತ್ರ ನಿರ್ವಹಿಸಲಿದೆ.


ಮಿಲ್ಲೆಟ್ ಹೆಲ್ತ್ ಮಿಕ್ಸ್‌ನಲ್ಲಿದೆ ವಿಟಮಿನ್ ಭಂಡಾರ

ಮಿಲ್ಲೆಟ್ ಹೆಲ್ತ್ ಮಿಕ್ಸ್ ವಿಟಮಿನ್‌ಗಳಾದ ಎ, ಬಿ, ಸಿ, ಡಿ, ಇ, ಕೆ ಹಾಗೂ ಬಿ, ಬಿ6, ಬಿ12ಗಳನ್ನು ಹೊಂದಿದೆ. ಕ್ಯಾಲ್ಶಿಯಮ್, ಮೆಗ್ನೀಶಿಯಮ್, ಪೊಟಾಷಿಯಮ್, ಐರನ್, ಸೋಡಿಯಮ್, ಫೋಸ್ಫೋರಸ್ ಮತ್ತು ಇತರೆ ಮಿನರಲ್ಸ್ ಹಾಗೂ ಪೋಷಕಾಂಶಗಳನ್ನು ಇದು ಪೂರೈಸುತ್ತದೆ. ಇನ್ನು ಈ ಮಿಲ್ಲೆಟ್ ಹೆಲ್ತ್ ಮಿಕ್ಸ್ ದೇಹಕ್ಕೆ ಬೇಕಾದ ಅಗತ್ಯ ಪ್ರೊಟೀನ್ಅನ್ನು ಕೂಡ ಪೂರೈಸಲಿದೆ.


ಗ್ಯಾಸ್ಟ್ರಿಕ್ ಸಮಸ್ಯೆಗೂ ಮುಕ್ತಿ

ಮೊದಲೇ ಹೇಳಿದಂತೆ ಮಿಲ್ಲೆಟ್ ಹೆಲ್ತ್ ಮಿಕ್ಸ್ ಉತ್ಪನ್ನ ಫೈಬರ್ ಅಂಶವನ್ನು ಹೆಚ್ಚಾಗಿ ಹೊಂದಿರುವುದರಿಂದ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಮಟ್ಟದಲ್ಲಿ ಇರಲಿದೆ. ಹೀಗಾಗಿ ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ಆಗಲಿದ್ದು, ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವ ಹಾಗೆ ಮಾಡಲಿದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗೆ ಮುಕ್ತಿ ಸಿಗುವುದು ಖಚಿತ.ಇತರೆ ಉತ್ಪನ್ನಗಳಿಗಿಂತ ಇದು ವಿಭಿನ್ನ

ಈ ಮಿಲ್ಲೆಟ್ ಹೆಲ್ತ್ ಮಿಕ್ಸ್ ಆಯುರ್ವೇದ ಗುಣಗಳನ್ನು ಹೊಂದಿರುವುದರಿಂದ ಇಲ್ಲಿಯವರೆಗೂ ಬಂದಿರುವ ಮಿಲ್ಲೆಟ್ ಉತ್ಪನ್ನಗಳಿಗಿಂತ ಇದು ವಿಭಿನ್ನ ಹಾಗೂ ವಿಶಿಷ್ಟವಾಗಿದೆ.


ಮಾಡುವ ವಿಧಾನ

ಮಿಲ್ಲೆಟ್ ಹೆಲ್ತ್ ಮಿಕ್ಸ್ ತಯಾರಿಸುವುದು ಬಹಳ ಸುಲಭ. ಒಂದೂವರೆ ಚಮಚ ಮಿಲ್ಲೆಟ್ ಹೆಲ್ತ್ ಮಿಕ್ಸ್ ಪೌಡರ್‌ಗೆ 200 ಮಿಲಿ ಲೀಟರ್ ಹಾಲು ಮತ್ತು 200 ಮಿಲಿ ಲೀಟರ್ ನೀರನ್ನು ಹಾಕಿ ಗಂಟು ಇರದ ರೀತಿ ಚೆನ್ನಾಗಿ ಕಲಸಬೇಕು. ನಂತರ ಇದಕ್ಕೆ ಒಂದು ಸಣ್ಣ ಬೆಲ್ಲದ ತುಂಡನ್ನು ಅಥವಾ ನಿಮ್ಮ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ಒಲೆಯ ಮೇಲಿಟ್ಟು ಕುದಿಸಬೇಕು. ನಂತರ ಇದನ್ನು ಸ್ವಲ್ಪ ಹೊತ್ತು ತಣಿಸಿದರೆ ಮಿಲ್ಲೆಟ್ ಹೆಲ್ತ್ ಮಿಕ್ಸ್ ಕುಡಿಯಲು ಸಿದ್ಧ.ಅನಗತ್ಯ ಅಂಶಗಳಿಲ್ಲ

ಈ ಉತ್ಪನ್ನ ಆಕರ್ಷಕವಾಗಿ ಕಾಣಲೆಂದು ಕೃತಕ ಬಣ್ಣ ಬಳಸಿಲ್ಲ, ಮೇಲೆ ಉಲ್ಲೇಖಿಸಿರುವ ಪದಾರ್ಥಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅನಗತ್ಯ ಪದಾರ್ಥಗಳನ್ನು ಬಳಸದೇ ತಯಾರಿಸಿರುವ 100% ಶುದ್ಧ ಉತ್ಪನ್ನವೇ ಮಿಲ್ಲೆಟ್ ಹೆಲ್ತ್ ಮಿಕ್ಸ್.ಗ್ರಾಹಕರು ಹೇಳಿದ್ದೇನು?

ಬೆಂಗಳೂರಿನ ಪದ್ಮನಾಭನಗರದ ಅಪಾರ್ಟ್ ಮೆಂಟ್ ಒಂದರ ನಿವಾಸಿಯಾದ ಶ್ರೀನಿವಾಸ ಮೂರ್ತಿ ಎಂಬ ಮಾಜಿ ನೌಕಾದಳ ನೌಕರರೊಬ್ಬರು ಈ ಉತ್ಪನ್ನವನ್ನು ಬಳಸಿದ್ದು, ಇದನ್ನು ಸೇವಿಸಲು ಆರಂಭಿಸಿದ ನಂತರ ಉತ್ತಮ ಫಲಿತಾಂಶ ಪಡೆದಿರುವುದಾಗಿ ತಿಳಿಸಿದ್ದಾರೆ. ತಾವು ನಿವೃತ್ತಿ ಹೊಂದಿದ ನಂತರ ವೃದ್ಧಾಪ್ಯದಲ್ಲಿ ಎದುರಿಸುವ ಸಮಸ್ಯೆಗಳಾದ ಮಂಡಿ ನೋವು, ಸುಸ್ತು, ಊಟ ಸೇರದಿರುವ ಸಮಸ್ಯೆಗಳಿಂದ ಬಳಸುತ್ತಿದ್ದರಂತೆ. ಆ ಸಂದರ್ಭದಲ್ಲಿ ಸ್ನೇಹಿತನೋರ್ವನ ಸಲಹೆ ಮೇರೆಗೆ ಮಿಲ್ಲೆಕ್ಸ್ ಮಿಲ್ಲೆಟ್ ಹೆಲ್ತ್ ಮಿಕ್ಸ್ ಉಪಯೋಗಿಸಿದ ನಂತರ ಈ ಎಲ್ಲಾ ಸಮಸ್ಯೆಗೂ ಮುಕ್ತಿ ಸಿಕ್ಕಿತು ಹಾಗೂ ರಕ್ತದೊತ್ತಡ ಕೂಡ ನಿಯಂತ್ರಣಕ್ಕೆ ಬಂತು ಎನ್ನುತ್ತಾರೆ ಶ್ರೀನಿವಾಸ ಮೂರ್ತಿ.ಬೆಂಗಳೂರಿನ ಗೌಡನಪಾಳ್ಯ ನಿವಾಸಿಗಳಾದ ಶ್ರೀಹರಿ ಮತ್ತು ದಂಪತಿಗಳೂ ಸಹ ಈ ಉತ್ಪನ್ನವನ್ನು ಬಳಸಿದ್ದು, ತಮಲ್ಲಿ ಕಂಡುಬಂದಿದ್ದ ಚರ್ಮದ ಉರಿ, ಆಯಾಸ, ಹಸಿವಾಗದೇ ಇರುವುದು, ಮಧುಮೇಹದ ಸಮಸ್ಯೆಗಳು ಮಾಯವಾದವು ಎಂದು ಸಂತಸ ವ್ಯಕ್ತಪಡಿಸಿದರು ಹಾಗೂ ವಯಸ್ಸಾದವರು ತಮ್ಮ ದೈನಂದಿನ ಬಳಲುವಿಕೆಗಳಿಂದ ದೂರವಾಗಲು ಮಿಲ್ಲೆಕ್ಸ್ ಮಿಲ್ಲೆಟ್ ಹೆಲ್ತ್ ಮಿಕ್ಸ್ ಬಳಸಿ ಎಂದು ಹೇಳಿದರು.

229 views0 comments

Recent Posts

See All
bottom of page